ಸುಮಾರು ೨೦ ಲಕ್ಷ ವರ್ಷಗಳಿಂದ ಆಧುನಿಕ ಮಾನವ ಜೀವಿಸುತ್ತಿದ್ದಾನೆ. ಇವನು ಮೊದಲು ಜಾಡಮಾಲಿ ಎಂದು ಮಾನವ ವಿಜ್ಞಾನ ತೋರಿಸುತ್ತಿದೆ, ನಂತರ ಬೇಟೆಯಾಡುವುದನ್ನು ಶುರುಮಾಡಿ ಅದನ್ನು ಒಟ್ಟುಗೊಳಿಸಿ ತಾತ್ಪರ್ಯವಾಗಿ ತಿನ್ನುತ್ತ ಮತ್ತು ಕೇವಲ ೧೦,೦೦ ವರ್ಷಗಳ ಹಿಂದೆಯೇ ವ್ಯವಸಾಯವನ್ನು ಮಾಡಲು ಶುರುಮಾಡಿದ್ದಾನೆ. ವ್ಯವಸಾಯದ ಪ್ರಗತಿಯಿಂದ ಮಾನವನ ಜೀವನ ಇನ್ನಷ್ಟು ಸುಲಭವಾಗಿ ವಿಕಸಿತಗೊಂಡಿದೆ, ಅರ್ಥಾತ್ ಜನಸಾಮಾನ್ಯರಿಗೆ ಮತ್ತಷ್ಟು ಆಹಾರ ದೊರೆಯುತ್ತಿತ್ತು ಹೇಗೆಂದರೆ ಒಂದೇ ಜಾಗದಲ್ಲಿ ವಿಧ ವಿಧವಾದ ಬೆಳೆಯನ್ನು ಬೆಳೆಯಲು ಸಾದ್ಯವಾಗುತ್ತಿತ್ತು. ಪೂರ್ತಿ ಮಾನವನ ನಾಗರೀಕತೆಯ ಕಾರ್ಯಕರ್ತ ಸಸಿಗಳು ಎಂದು ಹೇಳಬಹುದು. ಪ್ರಾರಂಬದ ನಾಗರಿಕತೆಯಲ್ಲಿ ಮಾನವನು ಸಸಿಗಳನ್ನು ಔಷದಿಯಾಗಿ ಬಳಸಿದನು. ೧೭೭೦ ಬಿ.ಸಿ ಬೇಬಿಲಾನ್ ನಲ್ಲಿ, ಅತೀ ಶೀಘ್ರದಲ್ಲಿ ಇದರ ಬಳಕೆಯಾಗಿದೆ ಎಂದು ಕಂಡುಬಂದಿದೆ. ದೇಸಿ ಸಸ್ಯಶಾಸ್ತ್ರವು ಸಾಮಾನ್ಯವಾಗಿ, ಪ್ರತ್ಯೇಕ ಸಂಸೃತಿ ಮತ್ತು ಪ್ರಾಂತದ ಜನರು ಹೇಗೆ ಸ್ಥಳೀಯ ಸಸ್ಯಗಳನ್ನು ಹೇಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಬಹುದು ಎಂದು ತಿಳಿಯಪಡಿಸುತ್ತದೆ. ಭಾರತದಲ್ಲಿ ಪಾರಂಪರಿಕ ಚಿಕಿತ್ಸೆಯು ರೂಡಿಯಲ್ಲಿದೆ ಇದರಲ್ಲಿ ಆಯುರ್ವೇದ, ಯೋಗ, ನ್ಯಾಚುರೋಪತಿ, ಯುನಾನಿ, ಸಿದ್ಧ ಮತ್ತು ಹೋಮಿಯೊಪತಿ ಒಳಗೊಳ್ಳುತ್ತದೆ, ಇದನ್ನು ಸಾಮುದಾಯಕವಾಗಿ ಎಂದು ಕರೆಯುತ್ತಾರೆ. = ಆಯುರ್ವೇದ = ಇದು ಅತೀ ಪುರಾತನ ಹಾಗು ಐತಿಹ್ಯ ರೀತಿಯಾದ ಔಷಧಿ ಅಂದರೆ ಜೀವನದ ಅರಿವು ಎಂದು ಹೇಳಬಹುದು. ಆಯುರ್ ಎಂದರೆ ಜೀವ ಮತ್ತು ವೇದ ಎಂದರೆ ಜ್ಞಾನ ಅಥವಾ ವಿಜ್ಞಾನ. ಆಯುರ್ವೇದ ಮನುಷ್ಯನ ದೇಹ, ಮನಸ್ಸು ಮತ್ತು ಜೀವಾತ್ಮದ ರೋಗಗಳನ್ನು ನಿವಾರಿಸಲು ಸಾದ್ಯ ಎಂದು ನಂಬುತ್ತದೆ. ಇದನ್ನು ಜಗತ್ಕರ್ತನಾದ ಬ್ರೆಹ್ಮನು ಸೃಷ್ಟಿಸಿದನೆಂಬ ನಂಬಿಕೆ. ಇವನು ಆಯುರ್ವೇದ ವಿಜ್ಞಾನವನ್ನು ಪ್ರಜಾಪತಿಗೆ ಭೋಧಿಸಿದನು, ಪ್ರಜಾಪತಿಯು ಅಶ್ವಿನಿ ದೇವತೆಗಳಿಗೆ, ಇವರು ಆತ್ರೇಯನಿಗೆ ಹೀಗೆ ಈ ಭೋದನ ಮುಂದುವರೆದಿದೆ ಎಂಬ ನಮ್ಬಿಕೆ ಜನ ಸಾಮಾನ್ಯರಲ್ಲಿದೆ. ಆಯುರ್ವೇದ ಮೊದಲು ರೋಗಿಯ ಸ್ವಭಾವವನ್ನು ವಿಂಗಡಿಸಿ ನಂತರ ಅವನ ಬಳಕೆ, ಜೀವನದ ಶೈಲಿ, ಕಾಯಿಲೆಯ ವಿಸ್ತಾರವನ್ನು ಆಯಿದರ್ವೇದ ೮ ವಿಭಾಗಗಳಲ್ಲಿ ಒಳಗೊಂಡಿದೆ. ೧. ಕಾಯ ಚಿಕಿತ್ಸ ( ) ೨. ಕೌಮಾರ ಭ್ರುತ್ಯ () ೩. ಭೂತ ವಿದ್ಯ () ೪. ಸಾಲಕ್ಯ (, ) ೫. ಶಾಲ್ಯ () ೬. ಅಘಾಡ ತಂತ್ರ () ೭. ರಾಸಾಯಣ ( ) ೮. ವಜೀಕರಣ ( ) = ಆಯುರ್ವೇದದ ತತ್ವಙ್ಞಾನ: = ಆಯುರ್ವೇದದ ಚಿಕಿತ್ಸೆ ವಾಡಿಕೆಯಲ್ಲಿರುವ ಚಿಕಿತ್ಸೆಗಿಂತ ಗುಣಮಾಡುವುದರಲ್ಲಿ ಬಹಳ ಬಿನ್ನವಾದ ಪದ್ದತಿಯನ್ನು ಒಳಗೊಂಡಿದೆ. “”ಸಮಧೋಷ ಸಮಗ್ನಿಶ್ಚ ಸಮಧಾತುಮಲಕ್ರಿಯ ಪ್ರಸನ್ನಾತ್ಮಮನಃ ಸ್ವತೈತಿಃ ಅಭಿಧಿಯತೆ”” ಅಗ್ನಿ ( ), ಧಾತು (), ಸರಳವಾದ ಮಲ ಕ್ರಿಯೆ ( ), ಸಂತೋಷ ಸ್ಥಿತಿಯುಳ್ಳ ಆತ್ಮ (), ಪಂಚೇಂದ್ರಿಯಗಳು ಮತ್ತು ಮನ್ನಸ್ಸು ಇವೆಲ್ಲವು ಸಮತೋಲನೆ ಸ್ಥಿತಿಯಲ್ಲಿ ಇದ್ದಲ್ಲಿ ಮಾನವನ ಜೀವನ ಆರೋಗ್ಯಕರವಾಗಿರುತ್ತದೆ ಆಯುರ್ವೇದ ಚಿಕಿತ್ಸ ದೇಹ ಮತ್ತು ಮನಸ್ಸಿನ ಸಮತೋಲನೆಯನ್ನು ಕಾಪಾಡುವುದರಲ್ಲಿ ಹೆಚ್ಚು ಪ್ರಾಧಾನ್ಯತೆಯನ್ನು ನೀಡುತ್ತದೆ, ಹೇಗೆಂದರೆ ಜೀವನ ಶೈಲಿ, ಆಹರ ಸೇವನೆ, ಪ್ರಾಕೃತಿಕ ಕಾರ್ಯಗಳಲ್ಲಿ ತೊಡಗುವುದು, ಯೋಗ, ಅಥವಾ ಧ್ಯಾನ ಮತ್ತು ಗಿಡ ಮೂಲಿಕೆಗಳ ವೈದ್ಯ ಇವೆಲ್ಲವುದರಿಂದ ದೇಹ ಮತ್ತು ಮನಸ್ಸಿನಲ್ಲಿ ನಿಶ್ಚಿತವಾದ ಬದಲಾವಣೆ ಉಟಾಗುತ್ತದೆ. ಆಯುರ್ವೇದ ಚಿಕಿತ್ಸೆ ಒಬ್ಬ ವ್ಯಕ್ತಿಯು ಮುಂದುವರೆಯುವುದುಕ್ಕಿಂತ ಮೊದಲು ಆ ವ್ಯಕ್ತಿಯ ದೋಷಗಳನ್ನು ಪರೀಕ್ಷಿಸುವಲ್ಲಿ ಹೆಚ್ಚಿನ ಪ್ರಾದಾನ್ಯತೆಯನ್ನು ನೀಡುತ್ತದೆ. ಆಯುರ್ವೇದ ಮಾನವನ ದೇಹ ಮತ್ತು ಪ್ರಕೃತಿಯ ಬಹಳ ವ್ಯಾಪಕವಾದಂತ ಚಿತ್ರವನ್ನು ಸೆಳೆದಿದೆ. ನೈಸರ್ಗಿಕ ಮೂಲಧಾತು ಪಂಚಮಹಾಭೂತಗಳಾದ- • ಕ್ಷಿತ () • ಜಲ () • ಮಾರುತಿ () • ತೇಜಸ್ಸು () • ವ್ಯೋಮ ( ) ಇವೆಲ್ಲವು ಕೂಡ ಮಾನವನ ದೇಹದ ಅಂಗಾಂಗಳಾಗಿವೆ ಎಂದು ಆಯುರ್ವೇದ ತಿಳಿಸುತ್ತದೆ. ಇವುಗಳು ಸ್ಪಷ್ಟವಾದ ಮೂರು ದೇಹದ ರಚನೆಯಲ್ಲಿ ತೊಡಗಿಕೊಂಡಿದೆ- • ಕಫ (/) • ಪಿತ್ತ () • ವಾತ (/) ಈ ಮೂರು ವಿಧಗಳು ಆಯುರ್ವೇದದಲ್ಲಿ ತ್ರಿದೋಷಗಳಾಗಿ ಪರಿಶೀಲಿಸಿದ್ದರೆ. = ಧೋಷಗಳು: = = ೧. ಕಫ ಪ್ರಕೃತಿ = ಕಫ ಪ್ರಕೃತಿ ಪೃಥ್ವಿ ಮತ್ತು ಜಲವನ್ನು ಒಳಗೊಂಡುತ್ತದೆ. ಜೀವನದ ಪೋಷಣಾಶಕ್ತಿಗಾಗಿ ಜಲ ಬಹಳ ಅವಶ್ಯಕ. ಪಥ್ವಿ ವಸ್ತುಗಳ ವಿನ್ಯಾಸ ಉಂಟುಮಾಡುವುದರಲ್ಲಿ ಹೊಣೆಯಾಗಿದೆ. ಕಫ ದೇಹದ ಆಕೃತಿ ಮತ್ತು ರಚನೆ ( ಕೊಬ್ಬು, ಸ್ನಾಯು, ಮೂಳೆ) ಯಾಗುವುದರ ಜವಾಬ್ದಾರಿ ತೆಗೆದುಕೊಳ್ಳುತ್ತದೆ. ಕಫದ ತಣ್ಣನೆಯ ಗುಣ, ಸಾರವಿಲ್ಲದ ಹಸಿವನ್ನು ಫಲಿಸುತ್ತದೆ. ಒಂದು ವೇಳೆ ಒಬ್ಬ ವ್ಯಕ್ತಿಯಲ್ಲಿ ಅಸಮತೊಲನೆ ಉಂಟಾದಲ್ಲಿ ಶ್ವಾಶಕೊಶದಲ್ಲಿ ಅವ್ಯವಸ್ಥೆ ಸ್ಬವಿಸುತ್ತದೆ. ಈ ಗದ್ದಲ ಮೇಲಿನ ಮೈ ಭಾಗದಲ್ಲಿ ಉಂಟಾಗುತ್ತದೆ. ಇದು ಸಾಮಾನ್ಯವಾಗಿ ಬಾಲ್ಯವಸ್ಥೆಯಲ್ಲಿ ಸಮ್ಬವಿಸುತ್ತದೆ ಮತ್ತು ಇದನ್ನು ಕಫಕಾಲ ಎಂದು ಕರೆಯುತ್ತಾರೆ. = ೨. ಪಿತ್ತ ಪ್ರಕೃತಿ = ಪಿತ್ತ ಪ್ರಕೃತಿ ಅಗ್ನಿ ಅಥವಾ ತೇಜವನ್ನು ಒಳಗೊಂಡಿದ, ಗಾಂಶಾಖ ಸಮರ್ಥ್ಯೆಯ ಮೂಲಧಾತು. ಇದು ದೇಹದ ಶಾಖೆಯನ್ನು ಪೋಶಣೆಮಾಡುವುದರಲ್ಲ ಹೊಣೆಯಾಗಿದೆ. ಪಿತ್ತ ರಂಧ್ರಗಳ ಹಾಗು ಅಂಗಾಂಶಗಳನ್ನು ಪರಿವರ್ತನಾ ಕ್ರಿಯೆಯನ್ನು ನಿಭಿಯಿಸುತ್ತದೆ. ಈ ವ್ಯಕ್ತಿಗಳು ಬಹಳ ಚುರುಕಾಗಿ ಮತ್ತು ಬಹುಬೇಗನೆ ಗ್ರಹಿಸುವ ಶಕ್ತಿಯನ್ನು ಹೊಂದಿರುತ್ತಾರೆ. ಇವರು ಪಾತಕ ರೋಗಗಳಿಗೆ ತುತ್ತಾಗುವ ಸಂಭವ ಹೆಚ್ಚಿರುತ್ತದೆ. ಇದು ಯೌವನಾವಸ್ಥೆಯಲ್ಲಿ ಕಂಡು ಬರುತ್ತದೆ, ಇದನ್ನು ಪಿತ್ತಕಾಲ ಎಂದು ಕರೆಯುತ್ತಾರೆ. = ೩.ವಾತ ಪ್ರಕೃತಿ = ವಾತ ಪ್ರಕೃತಿ ವಾಯು ಮತ್ತು ಆಕಾಶವನ್ನು ಹೊಂದಿರುತ್ತದೆ, ಇದು ಉಸಿರಾಟ ಮತ್ತು ಚಲನಾ ಕಾರ್ಯಗಳನ್ನು ಹತೋಟಿಯಲ್ಲಿಡುತ್ತದೆ. ದೇಹದ ಮುಖ್ಯ ಕ್ರಿಯೆಗಳನ್ನು (ನರಗಳ ಒತ್ತಡ, ಉಸಿರಾಟ) ನಿರ್ಭಂದನದಲ್ಲಿಡುತ್ತದೆ. ಒಂದು ವೇಳೆ ವಾತ ಪ್ರೊಕೃತಿಯ ಅಸಮತೋಲನೆ ಉಂಟಾದಲ್ಲಿ ಮಾನಸಿಕ ತೊಂದರೆಗೆ ಒಳಗಾಗುತ್ತಾರೆ ಹಾಗು ನರ ಕಾಯಿಲೆಲೆಗಳು ಸಂಭವಿಸುತ್ತದೆ. ಇವು ವೃಧ್ಹಾವಸ್ಥೆಯಲ್ಲಿ ಕಾಣಿಸಿಕೊಳ್ಳುತ್ತದೆ. ಔಷದೀಯ ಮೂಲಿಕೆಗಳನ್ನು ಸಮಯಕ್ಕೆ ತಕ್ಕಂತೆ ಬಳಸಿದರೆ ಒಬ್ಬ ವ್ಯಕ್ತಿಯ ಆರೋಗ್ಯ ಸಮತೋಲನೆಯಲ್ಲಿರುತ್ತದೆ. == ಕೆಲವು ಮುಖ್ಯವಾದ ಔಷದೀಯ ಗಿಡಗಳು == 1.ಸಾಮಾನ್ಯ ಹೆಸರು: ಶ್ರೀಗಂಧ ವೈಜ್ಞಾನಿಕ ಹೆಸರು: ಸಾಂಟಾಲಮ್ ಆಲ್ಬಮ ವಿಧ: ಮರ ಭಾಗದ ಬಳಕೆ: ತೊಗಟೆ/ಚಕ್ಕೆ ರೋಗದ ಪರಿಹಾರ: ಚರ್ಮ ರೋಗ, ಕೆಮ್ಮು, ಜಾಂಡಿಸ್ 2.ಸಾಮಾನ್ಯ ಹೆಸರು: ತುಳಸಿ ವೈಜ್ಞಾನಿಕ ಹೆಸರು: ಒಸಿಮಮ್ ಸಾಂಕ್ಟಮ್ ವಿಧ: ಸಸಿ ಭಾಗದ ಬಳಕೆ: ಎಲೆಗಳು ರೋಗದ ಪರಿಹಾರ: ಕೆಮ್ಮು, ಶೀತ, ಗಂಟಲು ರೋಗ 3.ಸಾಮಾನ್ಯ ಹೆಸರು: ಗೋರಂಟಿ ವೈಜ್ಞಾನಿಕ ಹೆಸರು: ಲವ್ಸೋನಿಯ ಐರ್ಮಿಸ್ ವಿಧ: ಕುರುಚಲ ಗಿಡ ಭಾಗದ ಬಳಕೆ: ಎಲೆ, ಹೂ, ಬೀಜ ರೋಗದ ಪರಿಹಾರ: ಉರಿಯುವಿಕೆ 5.ಸಾಮಾನ್ಯ ಹೆಸರು: ವಿಂಕ ವೈಜ್ಞಾನಿಕ ಹೆಸರು: ವಿಂಕ ರೋಸಿಯ ವಿಧ: ಸಸಿ ಭಾಗದ ಬಳಕೆ: ಪೂರ್ತಿ ಗಿಡ ರೋಗದ ಪರಿಹಾರ: ರಕ್ತಕ್ಷಯ 6.ಸಾಮಾನ್ಯ ಹೆಸರು: ಬೇವು ವೈಜ್ಞಾನಿಕ ಹೆಸರು: ಅಜಾರ್ಡಿಚಾಟ ಇಂಡಿಕ ವಿಧ: ಮರ ಭಾಗದ ಬಳಕೆ: ಶಾಖಾಕಾಂಡ ರೋಗದ ಪರಿಹಾರ: ಮಲರೋಗ, ಶೀತಲ